ಬಹರೈನ್ನಲ್ಲಿ ಕಳೆದ 42 ವರುಷಗಳಿಂದ ಕನ್ನಡದ ಕಂಪನ್ನು ಪಸರಿಸುತ್ತಿರುವ #ಬಹರೈನ್ #ಕನ್ನಡ #ಸಂಘದ ಕಾರ್ಯಕ್ರಮ


ಗುರು ಸೇವಾ ಸಮಿತಿ ಬಹ್ರೈನ್ ಬಿಲ್ಲವಾಸ್ 15 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ



ಕಾರ್ಕಳ ಎಣ್ಣೆಹೊಳೆ ನೀರಾವರಿ ಯೋಜನೆಗೆ 40 ಕೋಟಿ ರೂ ಅನುದಾನ
ಕಾರ್ಕಳ ಶಾಸಕರಾದ ಶ್ರೀ ವಿ ಸುನಿಲ್ ಕುಮಾರ್ ರವರು ಕಳೆದ 3 ವರುಷಗಳಿಂದ ಸತತವಾಗಿ ಸರಕಾರಕ್ಕೆ ಒತ್ತಾಯ ಮಾಡಿ ಕಳೆದ ಸರಕಾರದ ಅವಧಿಯಲ್ಲಿ ವಿಧಾನಸಭೆಯಲ್ಲಿ ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ ಬಿ ಪಾಟೀಲ್ ಅವರನ್ನು ಸದನದಲ್ಲಿ ಇದರ ಬಗ್ಗೆ ಗಮನ ಸೆಳೆದು ಅಧಿಕಾರಿಗಳೊಂದಿಗೆ ನಿರಂತರ ಚರ್ಚೆಯನ್ನು ನಡೆಸಿ ನಂತರ ಈಗಿನ ಸರ್ಕಾರದ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ಮನವಿ ಮಾಡಿ ಒತ್ತಾಯಿಸಿದ ಪರಿಣಾಮ ಇದೀಗ ಬಜೆಟ್ ನಲ್ಲಿ ಕಾರ್ಕಳ ಅಜೆಕಾರು ನೀರಾವರಿ ಯೋಜನೆಗೆ *40 ಕೋಟಿ ಅನುದಾನ* ಘೋಷಣೆಯಾಗಿದೆ…

ನಮ್ಮ ಶಾಸಕ ನಮ್ಮ ಹೆಮ್ಮೆ…
ಶಾಸಕರ ಶಾಶ್ವತ ಕಾಮಗಾರಿಗೆ ಮತ್ತೊಂದು ಕಾಮಗಾರಿ ಸೇರ್ಪಡೆ…
ಸ್ವರ್ಣ ಕಾರ್ಕಳ- ಸ್ವಚ್ಛ ಕಾರ್ಕಳ
ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಬೈಂದೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ




ಕೇರಳದಲ್ಲಿ ನಡೆದ ಶಬರಿ ಮಲೆ ಸಂರಕ್ಷಣಾ ಪಾದಯಾತ್ರೆಯಲ್ಲಿ




ಇಂದು ರಾಜೀವ್ ಗಾಂದಿ ವಸತಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಅನ್ಬು ಕುಮಾರ್ ರವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ತಾಲೂಕಿನಲ್ಲಿ ಬೇರೆ ಬೇರೆ ತಾಂತ್ರಿಕ ಕಾರಣಗಳಿಂದ (ಬ್ಲಾಕ್) ನೆನೆಗುದಿಗೆ ಬಿದ್ದಿರುವ ವಸತಿ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ನಿಯಮಾವಳಿಗಳನ್ನು ಸಡಿಲಗೊಳಿಸುವ ಬಗ್ಗೆ ವಿವರವಾಗಿ ಚರ್ಚಿಸಲಾಯಿತು…

ಇಂದು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಕಾರ್ಕಳ-ಬೆಳ್ಮಣ್-ಪಡುಬಿದ್ರಿ ಯಲ್ಲಿ ಟೋಲ್ ಸಂಗ್ರಹದಿಂದ ಆಗುವ ಸಮಸ್ಯೆಯನ್ನು ಸವಿವರವಾಗಿ ತಿಳಿಸಿ, ಟೋಲ್ ಮಾಡದಂತೆ ಒತ್ತಾಯಿಸಿ ಮನವಿ ಮಾಡಿದಾಗ #ಮುಖ್ಯಮತ್ರಿಗಳು ಇದಕ್ಕೆ ಸ್ಪಂದಿಸಿ ಅತೀ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ….










