ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವು ದಾಖಲೆಯ ವೇಗದಲ್ಲಿ ನಡೆಯುತ್ತಿದೆ.

ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ನಡೆಯುತ್ತಿದ್ದು ರಾಜ್ಯ ಸರಕಾರ ಗುರುತಿಸಿರುವ ದುರ್ಬಲ ಗುಂಪಿನವರಿಗೆ ಹಾಗೂ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಉಚಿತ ಲಸಿಕೆ ನೀಡುವ ನಿಟ್ಟಿನಲ್ಲಿ ಇಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ “ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಉದ್ಘಾಟನಾ ಸಮಾರಂಭ”




ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 70 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮ.



ಲಾಕ್ಡೌನ್ ನಿಂದ ತೊಂದರೆಗೊಳಗಾಗಿ ಬೆಂಗಳೂರಿನಿಂದ ಕಾರ್ಕಳಕ್ಕೆ ಆಗಮಿಸಿದವರಿಗೆ ಮತ್ತೆ ತುರ್ತು ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಲು ಎರಡ ಹಂತದಲ್ಲಿ ಬಸ್ ವ್ಯವಸ್ಥೆ ಮಾಡಿ ಕಳುಹಿಸಿ ಕೊಡಲಾಯಿತು.




ಶಾಸಕ ಮಿತ್ರ ಶ್ರೀ ರಘುಪತಿ ಭಟ್ ರವರ ವಿನೂತನ ಯೋಜನೆ ಹಡಿಲು ಭೂಮಿ ಕೃಷಿ ಆಂದೋಲನದ ನಿಮಿತ್ತ ಕಿದಿಯೂರು ನಲ್ಲಿ ಭತ್ತದ ಪೈರು ನೀಡಿ ಚಾಲನೆ ನೀಡುವ ಅವಕಾಶ ನನಗೆ ಇಂದು ದೊರಕಿತು.



ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ 30 ಕೆ.ವಿ ಸಾಮಥ್ರ್ಯದ ಜನರೇಟರ್ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 25 ಕೆ.ವಿ ಸಾಮರ್ಥ್ಯದ ಜನರೇಟರ್, 1 ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ಅಂಬ್ಯುಲೆನ್ಸ್ ತಾಲೂಕು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.



20 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಕಾರ್ಕಳ ಬಿಳಿ ಬೆಂಡೆ ಬೆಳೆಸುವ ಸಿದ್ಧತೆ.










