Comments Off on ತಾಲೂಕಿನಲ್ಲಿ ನೂರಾರು ವರ್ಷಗಳಿಂದ ಮುರ್ಗೆಕಳ, ಸತ್ಯಸಾರಮಣಿ,ಕಾಡ್ಯ ದೈವಸ್ಥಾನಗಳಿಗೆ ಇವತ್ತಿನವರೆಗೂ ಯಾವುದೇ ದಾಖಲೆಗಳಿಲ್ಲ. ಖಾಸಗಿಯವರ ಬಳಿ ಡಿಮ್ಡ್-ಫಾರೆಸ್ಟ್,ಸರಕಾರಿ ಇತ್ಯಾದಿ ಹೆಸರಿನಲ್ಲಿರುವ ಅಂತಹ 96 ದೈವಸ್ಥಾನದ ಪ್ರಮುಖರ ಸಭೆ ಇಂದು ನಡೆಯಿತು. ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮುಂದಿನ 3-4 ವರ್ಷದಲ್ಲಿ ಜೀರ್ಣೋದ್ಧಾರ ಮಾಡಬೇಕೆಂಬ ಹಂಬಲ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಮಾನ್ಯ ಜಿಲ್ಲಾಧಿಕಾರಿಗಳು,ತಹಸೀಲ್ದಾರರು ತಾಲೂಕಿನ ಗ್ರಾಮಕರಣಿಕರು ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಕ್ಷೇತ್ರದ ಪ್ರಮುಖರ ಜೊತೆ ಚರ್ಚೆ ನಡೆಯಿತು
Comments Off on NON CRZ ವ್ಯಾಪ್ತಿಯಲ್ಲಿ ಮರಳು ದಿಬ್ಬ ವನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ಗುಜರಾತ್ ನ ಅಧಿಕಾರಿಗಳೊಂದಿಗೆ ಚರ್ಚೆ.. ಗುಜರಾತ್ ನಲ್ಲಿ ಮರಳು ದಿಬ್ಬವನ್ನು ತೆರವು ಗೊಳಿಸಲು ಅಲ್ಲಿರುವಂತಹ ಕಾನೂನು ಮತ್ತು ಪದ್ದತಿಗಳು ಸರಳವಾಗಿದೆ. ಈ ಕುರಿತಂತೆ ಗುಜರಾತ್ ಗೆ ಭೇಟಿ ನೀಡಿ ಗುಜರಾತ್ ಸರ್ಕಾರದ ಗಣಿ ಮತ್ತು ಕೈಗಾರಿಕೆಯ ಆಯುಕ್ತರಾದ ಶ್ರೀ ಅರುಣ್ ಕುಮಾರ್ ಸೊಲಂಕಿ ಮತ್ತು ಅಲ್ಲಿಯ ಅಧಿಕಾರಿಗಳನ್ನು ಅಹಮದಾಬಾದ್ ನಲ್ಲಿ ಇಂದು ಶಾಸಕರಾದ ಶ್ರೀ ರಘುಪತಿ ಭಟ್ ಅವರೊಂದಿಗೆ ಕರ್ನಾಟಕದ ಅಧಿಕಾರಿಗಳ ಜೊತೆ ಭೇಟಿ ಮಾಡಿ ಚರ್ಚಿಸಲಾಯಿತು.