ಶಾಸಕ ಮಿತ್ರ ಶ್ರೀ ರಘುಪತಿ ಭಟ್ ರವರ ವಿನೂತನ ಯೋಜನೆ ಹಡಿಲು ಭೂಮಿ ಕೃಷಿ ಆಂದೋಲನದ ನಿಮಿತ್ತ ಕಿದಿಯೂರು ನಲ್ಲಿ ಭತ್ತದ ಪೈರು ನೀಡಿ ಚಾಲನೆ ನೀಡುವ ಅವಕಾಶ ನನಗೆ ಇಂದು ದೊರಕಿತು.



ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ 30 ಕೆ.ವಿ ಸಾಮಥ್ರ್ಯದ ಜನರೇಟರ್ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 25 ಕೆ.ವಿ ಸಾಮರ್ಥ್ಯದ ಜನರೇಟರ್, 1 ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ಅಂಬ್ಯುಲೆನ್ಸ್ ತಾಲೂಕು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.



ಕರ್ನಾಟಕ ರಾಜ್ಯ ಗೋಡಂಬಿ ಉತ್ಪಾದಕರ ಸಂಘದ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.


ಕಾರ್ಕಳ ಬಿಳಿಬೆಂಡೆ ಬೀಜವನ್ನು ಇಂದು ಹೆಬ್ರಿ, ಬಜಗೋಳಿ, ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಎಲ್ಲಾ ಪಂಚಾಯತ್ ಗಳಿಗೆ ವಿತರಿಸಲಾಯಿತು. ಕಾರ್ಕಳ ಬಿಳಿ ಬೆಂಡೆ. ನಮ್ಮ ಮನೆಯಂಗಳದೆಲ್ಲೆಡೆ ಬೆಳೆಸೋಣ ಕಾರ್ಕಳ ಬಿಳಿಬೆಂಡೆ.




ಕಾರ್ಕಳ ಬಿಳಿ ಬೆಂಡೆ ಬೀಜದ ಪ್ಯಾಕಿಂಗ್ ನಲ್ಲಿ ನಿರತರಾಗಿರುವ ಮಹಿಳಾ ಮೋರ್ಚಾ ಸದಸ್ಯರು. 20 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಕಾರ್ಕಳ ಬಿಳಿ ಬೆಂಡೆ ಬೆಳೆಸುವ ಯೋಜನೆ. ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ನಾಳೆಯಿಂದ ಬಿಳಿಬೆಂಡೆ ಬೀಜ ಲಭ್ಯವಾಗುತ್ತದೆ.




ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಕಾರ್ಕಳ ತಾಲೂಕಿನ ಮಿಯಾರು ಮೊರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಹಣ್ಣು,ಮಾಸ್ಕ್ ,ಸ್ಯಾನಿಟೈಜರ್, ಅಕ್ಸಿಮೀಟರ್ ವಿತರಿಸಲಾಯಿತು

ಕಾರ್ಕಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ವೀಕ್ಷಿಸಿದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ನಮ್ಮ ಯೋಗಕ್ಷೇಮ ಹೆಲ್ಪಡೆಸ್ಕ್ ನಲ್ಲಿ ನಿರಂತರವಾಗಿ ಸೇವೆ ಮಾಡುತ್ತಿರುವ ನಮ್ಮ ತಂಡವನ್ನು ಭೇಟಿ ಮಾಡಲಾಯಿತು.










