೬೬ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನವನ್ನು ರಾಜಭವನದಲ್ಲಿ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಅವರು ಸ್ವತಃ ಕನ್ನಡ ಮಾತನಾಡುವ ಮೂಲಕ ಉದ್ಘಾಟಿಸಿದರು.




೬೬ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ʻಕನ್ನಡಕ್ಕಾಗಿ ನಾವುʼ ವಿಶೇಷ ಅಭಿಯಾನವನ್ನು ಕಿರು ನಾಟಕ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಕುವೆಂಪು ಭಾಷಾ ಭಾರತಿಯಿಂದ ಪ್ರಕಟಿಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.




ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಶಿವರಾಜ್ ಸಜ್ಜನರ ಅವರ ಪರವಾಗಿ ತಿಳುವಳ್ಳಿ ಜಿಲ್ಲಾ ಪಂಚಾಯತಿನ ಹಿರೇಬಸೂರು, ಕೆಲವರ ಕೊಪ್ಪ ಮತ್ತು ಮಾಲಾಪೂರದಲ್ಲಿ ಪ್ರಮುಖರ ಜೊತೆ ಸಭೆ.




ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಟೋಬರ್ 24ರಿಂದ 30ವರೆಗೆ ಕನ್ನಡ ಅಭ್ಯುದಯಕ್ಕಾಗಿ “ಕನ್ನಡಕ್ಕಾಗಿ ನಾವು” ಅಭಿಯಾನ ಹಾಗೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕುರಿತು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ



ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ನಡೆದ ಕರ್ನಾಟಕ ಇ ಮೊಬಿಲಿಟಿ ಕಾರ್ಯಗಾರ. ಇಲೆಕ್ಟ್ರಿಕಲ್ ವೆಹಿಕಲ್ ಗಳಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಇಲೆಕ್ಟ್ರಿಕಲ್ ವೆಹಿಕಲ್ ಉತ್ಪಾದಕ ಕಂಪೆನಿಗಳೊಂದಿಗೆ ನಡೆದ ಪ್ರಥಮ ಕಾರ್ಯಗಾರ. Karnataka E-Mobility Workshop





ಬೆಂಗಳೂರಿನ ಕನ್ನಡ ಭವನದಲ್ಲಿ ಸಾಹಿತಿ, ಕಲಾವಿದರನ್ನು ಭೇಟಿಮಾಡಲು ನನ್ನ ಕಚೇರಿ ಕಾರ್ಯಾರಂಭದ ಜೊತೆಗೆ ಅದರೊಂದಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ, ಆಜಾದಿ ಕಾ ಅಮೃತಮಹೋತ್ಸವ ಮತ್ತು ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಲಾಪ್ರದರ್ಶನ ಉದ್ಘಾಟನೆ.























