ರಾಜ್ಯ ಪ್ರಶಸ್ತಿ ವಿಜೇತ ಸಾಣೂರು ಯುವಕ ಮಂಡಲ ವತಿಯಿಂದ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಯಿತು. ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿರುವ ಯುವಕ ಮಂಡಲ ನಮ್ಮ ಕರೆಯ ಮೇರೆಗೆ ಕಾರ್ಕಳ ಬಿಳಿ ಬೆಂಡೆ ಬೆಳೆಸಿದ್ದು, ಜೊತೆಗೆ ಮೊದಲ ಫಸಲನ್ನು ಸ್ಮರಣಿಕೆ ರೂಪದಲ್ಲಿ ಕೊಟ್ಟಿರುವುದು ಅವಿಸ್ಮರಣೀಯ. ಈ ರೀತಿಯ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲಿಸಿ ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು.


